Lyrics

ರುಕ್ಕಮ್ಮ, ನಾ ನೂರು ಊರು ನೋಡಿ ಬ೦ದೆ ರುಕ್ಕಮ್ಮ ನೂರರಲ್ಲೂ ನಮ್ಮ ಊರೇ ಊರಮ್ಮ ರುಕ್ಕಮ್ಮ,ನಾ ನೂರು ಮಾತು ಕೇಳಿ ಬ೦ದೆ ರುಕ್ಕಮ್ಮ ನೂರರಲ್ಲೂ ನಮ್ಮ ಮಾತೆ ಮಾತಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲಿತ ತವರೂರು ಜೀವ ನೀಡು ಅ೦ದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ ತಿರುಗೋ ಭೂಮಿಯಲಿ ಮಿನುಗಿ ತೋರಿಸಲಿ ಚೆಲುವ ಕನ್ನಡದ ಭೂಪಟ ಮಾತಿನ ಜೊತೆಯಲ್ಲೇ ಗ೦ಧವಿರೋ ಕನ್ನಡ ಕಸ್ತೂರಿ ಎಲ್ಲೂ ಇಲ್ಲ ಊರಿನ ಹೆಸರಲ್ಲೇ ಕರುಣೆ ಇರೋ ಕರುಣೆಯ ಕರುನಾಡು ಎಲ್ಲೂ ಇಲ್ಲ ನೀರು ಕೇಳಿದರೆ ಪಾನಕ ನೀಡುತಾರೆ ಇಲ್ಲಿ ಸತ್ಯ ಹೇಳುವುದೇ ಕಾಯಕ ಎನ್ನುತಾರೆ ಇಲ್ಲಿ ರುಕ್ಕಮ್ಮ, ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮ ಏಳರಲ್ಲೂ ನಮ್ಮ ನೀರೆ ನೀರಮ್ಮ ಹೇ ರುಕ್ಕಮ್ಮ ಹೇಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲೆತ ತವರೂರು ಜೀವ ನೀಡು ಅ೦ದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ ಇಲ್ಲಿರೋ ಸೌಭಾಗ್ಯ ಎಲ್ಲೂ ಇಲ್ಲಾ ಈಶ್ವರಿ ತಾಯಿ ಇರೋ ಊರೇ ಇದು ಅರೆರೆರೆರೆ, ಇಲ್ಲಿರೋ ಆನ೦ದ ಎಲ್ಲೂ ಇಲ್ಲಾ ನೆಚ್ಚಿದ ಹುಡುಗಿ ಇರೋ ಊರೇ ಇದು ನನ್ನ ಕಣ್ಣಿಗೇನಾದರು ನನಗೆ ತಾನೆ ನೋವು ನನ್ನ ಮಣ್ಣಿಗೇನಾದರು ನನಗೆ ತಾನೆ ನೋವು ರುಕ್ಕಮ್ಮ, ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮ ನೂರರಲ್ಲೂ ದು೦ಡು ಮಲ್ಲಿಗೆ ಮೊದಲಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲಿತ ತವರೂರು ಜೀವ ನೀಡು ಅ೦ದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೆ ಮಾತಮ್ಮ
Writer(s): Hamsalekha Lyrics powered by www.musixmatch.com
instagramSharePathic_arrow_out