Lyrics
ದೂರ ಹೋಗೋ ಮುನ್ನ ದೂರಲಾರೆ ನಿನ್ನ
ಮೌನದಲ್ಲೇ ಇನ್ನು ಗಾಯಾಳು ನಾ
ನಾನು ನೀನು ಭಿನ್ನ ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ
ಏಕೆ ಹೀಗೆ?
ದೂರ ಹೋಗೋ ಮುನ್ನ ದೂರಲಾರೆ ನಿನ್ನ
ಮೌನದಲ್ಲೇ ಇನ್ನು ಗಾಯಾಳು ನಾ
ನಾನು ನೀನು ಭಿನ್ನ ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ ಶಾಮೀಲು ನಾ
ಕನಸಿನ ಮರಣಕೆ, ಮುಗಿಯದ ಸೂತಕ
ಉಸಿರಿನ ಸಂಕಟ ಹೀನಾಯ
ನಲುಮೆಯ ಇರುಳಿಗೆ, ಚಂದ್ರನೇ ಘಾತುಕ
ಸಹಿಸಲಿ ಹೇಗೆ ನಾ ಅನ್ಯಾಯ
ವಿಳಾಸವಿಲ್ಲ ನಾ ಸಾಗೋ ಈ ಕಾಲು ದಾರಿಗೆ
ಕಣ್ಣೀರ ಮಾತೆ ವಿದಾಯ ಈ ನಿನ್ನ ಬಾಳಿಗೆ
ಅರಳುವ ಮುಂಚೆ ಬಾಡಿದೆ ಹೂ ನಗೆ
ದೂರ ಹೋಗೋ ಮುನ್ನ ದೂರಲಾರೆ ನಿನ್ನ
ಮೌನದಲ್ಲೇ ಇನ್ನು ಗಾಯಾಳು ನಾ
ಜಗದಲಿ ಅನುದಿನ, ನಗುವಿನ ನಾಟಕ
ಮರೆಯಲಿ ಅಳುವುದು ಮಾಮೂಲಿ
ಮನಸಿನ ಆಳವೇ, ನೋವಿನ ಕಂದಕ
ಬೀಳದೆ ಸಾಗು ನೀ ಬಾಳಲ್ಲಿ
ವಿಷಾಧವೇನು ಇನ್ನಿಲ್ಲ ಈ ನನ್ನ ಪಾಲಿಗೆ
ಸಂಪೂರ್ಣವಾಗಿ ಸೋತಂತೆ ನಾನೀಗ ಸೋಲಿಗೆ
ಮುಗಿಯದ ನೂರು ಮಾತಿವೆ ಹೇಳಲು
ದೂರ ಹೋಗೋ ಮುನ್ನ ದೂರಲಾರೆ ನಿನ್ನ
ಮೌನದಲ್ಲೇ ಇನ್ನು ಗಾಯಾಳು ನಾ
ನಾನು ನೀನು ಭಿನ್ನ ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ
Written by: Pramod Maravanthe, Sridhar V. Sambhram