Lyrics

ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ "ಏನೋ ಹೇಳು" ಅಂತು, "ಅದೇನೋ ನೀ ಕೇಳು" ಅಂತು ನನ್ನ ಮನಸು ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ ಎಂದೋ, ಅದೆಂದೋ ಅವಳನ್ನು ನಾ ನೋಡಿದಂತೆ ದಿನವೂ, ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆ ಜೊತೆ-ಜೊತೆಯಲಿ ನಲಿ-ನಲಿಯುತ ದಿನಗಳು ಕಳೆದಂತೆ ಹಗಲಿರುಳಿನ ಅರಿವಿಲ್ಲದೆ ಮೈ-ಮನ ಮರೆತಂತೆ ಬೊಗಸೆ ಕಣ್ಣಲ್ಲಿ ನಾ ಮಿಂದು ಬಂದು ಕನಸ ಸುರಿಗೈಯಲೇ ನಾನು ಈಗ? ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ ಗಾಳಿ, ತಂಗಾಳಿ, ಅವಳನ್ನು ನೀ ಸೋಕಬೇಡ ಅವಳ ಹೂನಗೆಯ ದಯಮಾಡಿ ನೀ ಕದಿಯಬೇಡ ಭೋರ್ಗರೆಯುವ ಅವಳಂದವು ನಾ ನೋಡಲು ತಾನೇ? ನನ್ನೊಲವಿನ ಸವಿಗನಸಲಿ ಅವಳಿದ್ದರೆ ತಾನೇ ಬಾಳ ಪುಟವೆಲ್ಲ ನಿನಗಾಗಿ ಇಡುವೆ ಬಂದು ನೀ ಸೇರಿಕೊ, ನನ್ನ ಗೆಳತಿ ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ
Writer(s): S. Narayan Lyrics powered by www.musixmatch.com
instagramSharePathic_arrow_out