Credits

PERFORMING ARTISTS
Disco Raga
Disco Raga
Performer
COMPOSITION & LYRICS
Purandara Dasaru
Purandara Dasaru
Lyrics
Sriranga R
Sriranga R
Composer
PRODUCTION & ENGINEERING
Disco Raga Musicals
Disco Raga Musicals
Producer

Lyrics

ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ದಾಸನ ಮಾಡಿಕೊ ಎನ್ನ
ದುರುಬುದ್ಧಿಗಳನೆಲ್ಲ ಬಿಡಿಸೋ
ನಿನ್ನ ಕರುಣಕವಚವೆನ್ನ, ಹರಣಕೆ ತೊಡಿಸೋ
ಚರಣ ಸೇವೆ, ಎನಗೆ ಕೊಡಿಸೋ
ಅಭಯ ಕರಪುಷ್ಪವಾ, ಎನ್ನ ಶಿರದಲಿ ಮುಡಿಸೋ
ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ದೃಢಭಕ್ತಿ ನಿನ್ನಲಿ ಬೇಡಿ
ನಾ, ಅಡಿಗೆರಗುವೆನಯ್ಯ, ಅನುದಿನ ಪಾಡಿ
ಕಡೆಗಣ್ಣಲೇಕೆನ್ನನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ, ಮನಶುಚಿ ಮಾಡಿ
ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ಮೊರೆಹೊಕ್ಕವರ ಕಾವ ಬಿರುದು
ಎನ್ನ, ಮರೆಯದೆ ರಕ್ಷಣೆ, ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು
ಸಿರಿ ಪುರಂದರ ವಿಠಲ, ಎನ್ನನು ಪೊರೆದು
ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ದಾಸನ ಮಾಡಿಕೊ ಎನ್ನ, ಸ್ವಾಮಿ
ಸಾಸಿರನಾಮದ ವೆಂಕಟರಮಣ
ವೆಂಕಟರಮಣ
ವೆಂಕಟರಮಣ
ದಾಸನ ಮಾಡಿಕೊ ಎನ್ನ
Written by: Purandara Dasaru, Sriranga R
instagramSharePathic_arrow_out

Loading...