Credits
PERFORMING ARTISTS
Hari
Music Director
Lokesh Krishna
Performer
COMPOSITION & LYRICS
Hari
Composer
Lokesh Krishna
Songwriter
PRODUCTION & ENGINEERING
R Chandru
Producer
Lyrics
[Intro]
ಒಂದು ದಿನ ಅವ್ಳು ಬಂದೇ ಬರ್ತಾಳಂತ
ಇದೇ ಜಾಗದಲ್ಲಿ ಕಾಯ್ತಾಯಿದ್ದೆ
[Verse 1]
ಒಲವಾ ಮೊದಲ ಜಳಕ
ಅದ ನೆನೆದರೇ ಪುಳಕ
ದಿನವಿಡೀ ಕಾದು ಕುಳಿತೆ
ಎದುರಿಗೆ ಬಂದಳಾಕೆ
ಪರಿಚಯ ಆದಮೇಲೆ
ಹೆಸರ ಹಿಡಿದು ಕರೆದೆ
ರಾಧೆ, ರಾಧೆ, ರಾಧೆ, ರಾಧೆ
[Verse 2]
ಅವಳೋದ ಜಾಗವೆಲ್ಲಾ ಚಿಗುರಿ ಮೆಲ್ಲ ಮೆಲ್ಲ
ಕೋಗಿಲೆ ಗಾನವೆಲ್ಲಾ ಚಿಮ್ಮುತ್ತಿದೆ ಮೆಲ್ಲ
ಅವಳೋದ ಜಾಗವೆಲ್ಲಾ ಚಿಗುರಿ ಮೆಲ್ಲ ಮೆಲ್ಲ
ಕೋಗಿಲೆ ಗಾನವೆಲ್ಲ ಚಿಮ್ಮುತ್ತಿದೆ
ರಾಧೆ, ರಾಧೆ, ರಾಧೆ, ರಾಧೆ
ರಾಧೆ, ರಾಧೆ, ರಾಧೆ, ರಾಧೆ
[Verse 3]
ಪರಿಚಯವಾದ ಆ ದಿನಗಳು
ಕಳೆದು ಹೋದ ಸಿಹಿ ಕ್ಷಣಗಳು
ಕೂಡಿ ಕಂಡ ಸಿಹಿ ಕನಸಲೂ
ಏನೋ ಜಾದು ಕಂಡೆ
ಅಪರೂಪವಾದ ಈ ವಿಲೇವಾರಿ
ಪ್ರೀತಿಯ ಉಸಾಬರಿ
ಒಲವಿಗೊಂದು ಹೊಸ ಖಾತರಿ
ಹೇಗೋ ನೀನು ತಂದೆ
ಮೊದಲ ಕವಿತೆ ಬರೆದ ದಿನ
ನನ್ನೊಳ ಮೆಚ್ಚಿನ ಕವಿಯಾದೆನಾ
ಮರಳಿ ಪಡೆದ ಆ ಚುಂಬನ
ರೋಮಾಂಚಿತ ಆದೆ ನಾ
ರಾಧೆ, ರಾಧೆ, ರಾಧೆ, ರಾಧೆ
[Verse 4]
ಪರಿಪಾಟವಾಯ್ತು ನನ ಬದುಕಲಿ
ದಿನವೂ ಕನಸುಗಳ ಹಾವಳಿ
ಒಂದೊಂದು ಕನಸಿನ ದಾಳಿಗೆ
ಹೇಗೋ ಸೋತು ಹೋದೆ
ವಿಪರೀತವಾದ ನಿನ್ನ ಒಲವಲಿ
ಕರಗಿ ಹೋದೆ ಜಡಿ ಮಳೆಯಲಿ
ನಡೆವ ಬಾರೆ ಖುಷಿ ಖುಷಿಯಲಿ
ಕೈಯ್ಯ ಹಿಡಿದುಕೊಂಡು
ಒಂದೊಂದು ಹೆಜ್ಜೆಯೂ ಬಲು ಮೋಹಕ
ನನ್ನೊಳ ಮಾತೆ ಸಿಹಿ ಚುಂಬಕ
ತುಂತುರು ಹನಿಗಳ ಸಿಂಚನ
ಸಮ್ಮೋಹಿತ ಆದೆ ನಾ
ರಾಧೆ, ರಾಧೆ, ರಾಧೆ, ರಾಧೆ
Written by: Hari, Lokesh Krishna