Şarkı sözleri

ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ ತಂದಾಳೋ ತಂದಾಳೋ ತಂದಾಳೋ ಪ್ರೇಮದ ಸಿರಿ ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ ಮಳೆಬಿಲ್ಲ ಮೇಲೆ ಇಳಿಜಾರೋ ಬಾಲೆ ರತಿದೇವಿ ಸೌಂದರ್ಯ ಸವತಿ ನೀ ಕವಿತೆ ನೀ ಕಾವ್ಯ ಸ್ಫೂರ್ತಿ ನೀ ಎದೆಯಾಳದೊಲವು, ಹೆಣ್ಣಾಗಿ ಬಂದ ಭೂಲೋಕ ಸೌಂದರ್ಯ ರಾಣಿ ನೀ ಪ್ರಾಣ ನೀ ನೀಲವೇಣಿ ನೀ ನಕ್ಕಾಳೋ, ನಕ್ಕಾಳೋ ಹುಣ್ಣಿಮೆ ಹಾಲಂತೆ ಉಕ್ಕ್ಯಾಳೋ, ಉಕ್ಕ್ಯಾಳೋ ತುಂಗೆಯ ನೀರಂತೆ ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಯಕೆ ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ ತಂದಾಳೋ ತಂದಾಳೋ ತಂದಾಳೋ ಪ್ರೇಮದ ಸಿರಿ ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ ಮಲೆನಾಡ ಸಿರಿಗೆ ಮನಸೋತು ನಿಂತ ಹಸಿರೂರ ಗಿರಿಬಾಲೆ ಹೆಣ್ಣು ನೀ ಕಣ್ಣು ನೀ ಬಾಳ ಬಣ್ಣ ನೀ ನಡುರಾತ್ರಿಯಲ್ಲಿ ಜಲರಾಶಿ ಮೇಲೆ ಗುರಿತೋರೋ ಏಕಾಂತ ತಾರೆ ನೀ ನೀರೇ ನೀ ಕಾವ್ಯಧಾರೆ ನೀ ಮೂಡ್ಯಾಳೋ, ಮೂಡ್ಯಾಳೋ ಮಾಗೀಯ ಕನಸಂತೆ ಮುತ್ತ್ಯಾಳೋ, ಮುತ್ತ್ಯಾಳೋ ಬೆಚ್ಚನೆ ಮುತ್ತಂತೆ ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಯಕೆ ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ ತಂದಾಳೋ ತಂದಾಳೋ ತಂದಾಳೋ ಪ್ರೇಮದ ಸಿರಿ ಬಂದಾಳೋ, ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ, ಬಂದಾಳೋ ಚಂದಿರ ಚಕೋರಿ
Writer(s): Hamsalekha Lyrics powered by www.musixmatch.com
instagramSharePathic_arrow_out