Lyrics

ಗುಡುಗುಡಿಯ ಸೇದಿ ನೋಡೋ ಗುಡುಗುಡಿಯ ಸೇದಿ ನೋಡೋ ಒಡಲೊಳಗಿನ ರೋಗ ತೊರೆದು ಇನ್ಯಾರೋ ಗುಡುಗುಡಿಯ ಸೇದಿ ನೋಡೋ ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ ಗುಡುಗುಡಿಯ ಸೇದಿ ನೋಡೋ ಬುರುಡಿ ಎಂಬುದು ಶರೀರ ಇದನ್ನರಿತು ಸುಕೃತಕ್ಕಿಟ್ಟು ಕೊಳವಿ ಆಕಾರ, ಕೊಳವಿ ಆಕಾರ ವರಶಿಶುನಾಳ ವರಶಿಶುನಾಳನೆಂಬ ನೀರ ತುಂಬಿ ವರಶಿಶುನಾಳನೆಂಬ ನೀರ ತುಂಬಿ ಅರಿವೆಂಬ ಅರಿವಿಯ ಹೊಚ್ಚೋ ಮೋಜುಗಾರ ಗುಡುಗುಡಿಯ ಸೇದಿ ನೋಡೋ ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು ಹೊಗೆಯು ಹಾರುವುದು ಬುದ್ಧಿವಂತರ ಎಳೆದು ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು ಹೊಗೆಯು ಹಾರುವುದು ಬುದ್ಧಿವಂತರ ಎಳೆದು ವರಸಿದ್ದ ಶಿಶುನಾಳದೀಶನ ತೋರ್ವುದು ವರಸಿದ್ದ ಶಿಶುನಾಳದೀಶನ ತೋರ್ವುದು ಗುಡುಗುಡಿಯ ಸೇದಿ ನೋಡೋ ಗುಡುಗುಡಿಯ ಸೇದಿ ನೋಡೋ ಗುಡುಗುಡಿಯ ಸೇದಿ ನೋಡೋ ಒಡಲೊಳಗಿನ ರೋಗ ತೊರೆದು ಇನ್ಯಾರೋ ಗುಡುಗುಡಿಯ ಸೇದಿ ನೋಡೋ
Writer(s): Raghu Dixit Lyrics powered by www.musixmatch.com
instagramSharePathic_arrow_out