音乐视频

Milana | Kivi Mathu | Power Star Puneeth Rajkumar | Parvathi Menon | Kunal Ganjawala | Manomurthy
观看 {artistName} 的 {trackName} 音乐视频

制作

出演艺人
Kunal Ganjawala
Kunal Ganjawala
表演者
Manomurthy
Manomurthy
表演者
作曲和作词
Manomurthy
Manomurthy
作曲
Jayanth Kaykini
Jayanth Kaykini
词曲作者

歌词

ಕಿವಿ ಮಾತೊಂದು ಹೇಳಲೇ ನಾನಿಂದು? ದಾರಿ ನಿಂತಾಗ, ಸಾಗಲೆಬೇಕೆಂದು ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೆಬೇಕೆಂದು ಹಸಿರಾಗಿದೆ ದೀಪವು ನಿನಗಾಗಿ ನಸುನಗುತಲೆ ಸಾಗು ನೀ ಗೆಲುವಾಗಿ ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ಕಿವಿ ಮಾತೊಂದು ಹೇಳಲೇ ನಾನಿಂದು? ದಾರಿ ನಿಂತಾಗ, ಸಾಗಲೆಬೇಕೆಂದು ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು, 'ಬಾ' ಎಂದು ಸಂತಸದಿಂದ 'ಓ' ಎಂದು ಓಡಲೇಬೇಕು ನೀನಿಂದು ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದು ಕಣ್ಣನು ತೆರೆದು ಹಗುರಾಗಿ ನೋಡಲೇಬೇಕು ನೀ ಬಂದು ಕಿವಿ ಮಾತೊಂದು ಹೇಳಲೇ ನಾನಿಂದು? ದಾರಿ ನಿಂತಾಗ, ಸಾಗಲೆಬೇಕೆಂದು ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೆಬೇಕಿಂದು ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ಕಿವಿ ಮಾತೊಂದು ಹೇಳಲೇ ನಾನಿಂದು? ದಾರಿ ನಿಂತಾಗ, ಸಾಗಲೆಬೇಕೆಂದು ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೆಬೇಕಿಂದು ಹಸಿರಾಗಿದೆ ದೀಪವು ನಿನಗಾಗಿ ನಸುನಗುತಲೆ ಸಾಗು ನೀ ಗೆಲುವಾಗಿ ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ಕಿವಿ ಮಾತೊಂದು ಹೇಳಲೇ ನಾನಿಂದು? ದಾರಿ ನಿಂತಾಗ, ಸಾಗಲೆಬೇಕೆಂದು ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೆಬೇಕಿಂದು
Writer(s): Mano Murthy, Jayant Kaikini Lyrics powered by www.musixmatch.com
instagramSharePathic_arrow_out