音乐视频

Matinalli Helalarenu
观看 {artistName} 的 {trackName} 音乐视频

制作

出演艺人
Sonu Nigam
Sonu Nigam
表演者
作曲和作词
Mano Murthy
Mano Murthy
作曲
Jayanth Kaikini
Jayanth Kaikini
作词

歌词

ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು ಆದರೂನೂ ಹಾಡದೇನೆ ಉಳಿಯಲಾರೆನು ಅಂಥ ರೂಪಸಿ ನನ್ನ ಪ್ರೇಯಸಿ ಎಲ್ಲಿ ಇರುವಳೋ ನನ್ನ ಕಾಯಿಸಿ ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ ಅಂಥ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ ಕಣ್ಣಲ್ಲಿದೆ, ಆ ಕಣ್ಣಲ್ಲಿದೆ ಹೊಂಬೆಳಕಿನ ನವ ನೀಲಾಂಜನ ಇನ್ನೆಲ್ಲಿದೆ, ಆಹಾ ಇನ್ನೆಲ್ಲಿದೆ ಹೂ ಮನಸಿನ ಆ ಮಧುಗುಂಜನ ಬೇರೆ ಏನೂ ಕಾಣಲಾರೆ ಯಾರ ನಾನು ದೂರಲಾರೆ ಸಾಕು ಇನ್ನು ದೂರವನ್ನು ತಾಳಲಾರೆನು ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ ಅಂಥ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು ಆದರೂನೂ ಹಾಡದೇನೆ ಉಳಿಯಲಾರೆನು ನಗೆಯಲ್ಲಿದೆ ಆ ಬಗೆಯಲ್ಲಿದೆ ಬಗೆಹರಿಯದ ಆ ಅವಲೋಕನ ನಡೆಯಲ್ಲಿದೆ ಆ ನುಡಿಯಲ್ಲಿದೆ ತಲೆಕೆಡಿಸುವ ಆ ಆಮಂತ್ರಣ ಕನಸಿಗಿಂತ ಚಂದವಾಗಿ ಅಳಿಸದಂಥ ಗಂಧವಾಗಿ ಮೊದಲ ಬಾರಿ ಕಂಡ ಕ್ಷಣವೇ ಬಂಧಿಯಾದೆನು ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ ಅಂಥ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು ಆದರೂನೂ ಹಾಡದೇನೆ ಉಳಿಯಲಾರೆನು ಅಂಥ ರೂಪಸಿ ನನ್ನ ಪ್ರೇಯಸಿ ಎಲ್ಲಿ ಇರುವಳೋ ನನ್ನ ಕಾಯಿಸಿ ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ ಅಂಥ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ
Writer(s): Jayanth Kaikini, Mano Murthy Lyrics powered by www.musixmatch.com
instagramSharePathic_arrow_out