音乐视频
音乐视频
制作
出演艺人
Karthik
领唱
Anuradha Bhat
领唱
Kaviraj
表演者
V Sridhar Sambhram
音乐总监
V Sridhar
音乐总监
作曲和作词
Kaviraj
词曲作者
V Sridhar
作曲
制作和工程
Suresh Jain
制作人
歌词
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ
ಪ್ರೀತಿನಾ ಇದು
ಪ್ರೀತಿನಾ ಇದು
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಚಲಿಸೋ ಓ ಬೆಳ್ಳಿ ಮೋಡ
ಇಳಿದು ಬಾ ನಿನ್ನ ಕೂಡ ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೇ
ಇನ್ನು ಎಂದು ನೆರಳ ಹಾಗೆ ನಾನು ಇವಳ
ಜೊತೆಯಲೇ ಇರಲಾ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ
ಪ್ರೀತಿನಾ ಇದು
ಪ್ರೀತಿನಾ ಇದು
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ
ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೇ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೋ ಮುನ್ನ ಹೇಳು ಆಸೆಯಾ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ
ಪ್ರೀತಿನಾ ಇದು
ಪ್ರೀತಿನಾ ಇದು
ನನ್ನಲ್ಲೇ ನಾನೇ ಇಲ್ಲ ಈಗ ಯಾಕೋ ಯಾಕೋ ಯಾಕೋ
Written by: Kaviraj, Kaviraj Kelnarase Hariyappa, V Sridhar, V Sridhar Murthy


