歌词

ನಂಗ್ ಸಿಗದಂತು ಬರಿ ಅಲ್ಪ ಸಲ್ಪ ಸಂಬಳ ಪಲ್ಟಿ ಹೊಡೆದರು ಸಿಗೋದಿಲ್ಲ ಗಿಂಬಳ Month-end ಬಂದ್ರೆ ಸಾಲ ಮಾಡಣ Close friend-ಇಗೆ call ಮಾಡಣ ಕೇಳಣ ಲೋ ಮಗಾ ಒಂದು ಹತ್ಸಾವ್ರುಪೈ ಕಾಸ್ ಕೊಡೋ Next month ಕೋಟ್ಬಿಡ್ತಿನಿ ಅದ್ಹೇನ್ಗೆ plan ಮಾಡಿ ಮದ್ಯಾನ್ಹೊತ್ತು ಊಟ ಬಿಟ್ಟು ಕದ್ದು ಮುಚ್ಚಿ bun-u ತಿಂದ್ರು ತಿಂಗಳಿಗೆ ನೂರ್ ರೂಪಾಯಿ ಉಳುಸ್ಕೊಳಕ್ ಆಗ್ತಿಲ್ಲ ಈದ್ಹಿಂಗೇ ಆಗೋಗಿ ಮೈ ತುಂಬಾ ಸಾಲ ಮಾಡಿ ತಲೆ ಮರ್ಸಿಕೊಂಡು ಊರು ಬಿಟ್ಟು ಹೋಗ Time ಅದು ಬಂದ್ರೂ ಬಂತಲ್ಲ ಆಗಲ್ಲ ಮೂರೂ maintain ಮಾಡೋಕೆ ನಾವ್ ಮಾಡೋ ಶೋಕಿ ಏನು ಒಂದಾ ಎರಡಾ daily Dose-dose cigarette ಸೇದ್ ಸೇದ್ ಎಸಿತೀನಿ ಹರ್ಟೆ ಹೊಡ್ಯೋಕ್ ಒಬ್ಬ ಸಿಕ್ರೆ ಇನ್ನು ಜಾಸ್ತಿ ಹೊಟ್ಟೆಗ್ ಊಟ ಇಲ್ಲ But ಒಳ್ಳೆ ಬಟ್ಟೆ ಬೇಕು ನಾನ್ ನಡಿಯೋದಿಲ್ಲ ಸುತ್ತಕ್ಕೆ car-e ಬೇಕು ನೋಡಿದೆಲ್ಲ ತಗೋಬೇಕು ಮುಟ್ಟಿದೆಲ್ಲಾ ನಂಗೆ ಬೇಕು ಮೂಸಿದೆಲ್ಲಾ ತಿನ್ನ ಬೇಕು ವೋಟ್ನಲ್ಲಿ ಹಾಯಾಗಿ ಇರಬೇಕು ಇದುವೇ ನನ್ನ ಜಾಯಮಾನ ಹೋದ್ರೆ ಹೋಗಲಿ ಪುಟಗೋಸಿ ಮಾನ ನನ್ನ life-y ಹಿಂಗಾಗಿದೆ (ಆಳಂಗಾಗಿದೆ) ನನ್ನ life-y ಹಿಂಗಾಗಿದೆ (ನಗಂಗಾಗಿದೆ) ನನ್ನ life-y ನನ್ನ life-y ನನ್ನ life-y ಹಿಂಗಾಗಿದೆ (ಇರ್ರಂಗಾಗಿದೆ) ನನ್ನ life-y ಹಿಂಗಾಗಿದೆ (ಹೋಗಂಗಾಗಿದೆ) ನನ್ನ life-y ನನ್ನ life-y Emi ಲಿ ಒಂದು Car ತಗೋತೀನಿ ಆಗಿದ್ದು ಆಗಲಿ ನಾಳಿದ್ದು ನಾಳೆ ನೋಡಣಾ ನಾನೂನು ಶ್ರೀಮಂತ ನನ್ನ ಹತ್ರಾನೂ car ಇದೆ ಅಂತ ನಕ್ಕೊಂಡ್ ಶೋಕಿಗಳ್ನ ಮಾಡ ಬೇಕಲ್ವಾ ನಾನಿರೋ ಊರು ಇದು ಅಂತ ದುಸ್ಸಾಮಿ ನಾನು ಶೋಕಿನ ಮಾಡದಿದ್ರೆ ಯಾರು ಮೂಸಲ್ಲ ಬಟ್ಟೆಯ brand-u ದುಬಾರಿ phone-u Shoe ನಾ, ಚಪ್ಲಿನಾ ನೋಡೀನೇ ಅಳಿಯೋದು ದುಡ್ಡಿದ್ರೆನೇ ಮರ್ಯಾದೆ ಮನೆಯಲ್ಲಿ ಉಗಾದಿ Level ತೋರ್ಸಾದಕ್ಕೆ ಇದೆ ನಂಗೆ full-u आज़ादी ಕಷ್ಟ ಇರ್ಲಿ, ಸುಖ ಇರ್ಲಿ ಶೋಕಿ ಮಾಡ್ತಿನಿ ಸುಮ್ಮನೆ Almost ಎಲ್ಲ ದೊಡ್ಡ ವ್ಯಕ್ತಿಗಳು ಮಾಡೋದು ಇದನ್ನೇ ಬಡ್ಡಿ ಇಲ್ಲದಂಗೆ ಸಿಕ್ಕಿಬಿಟ್ರೆ ಸಾಲ ನೆಲದ್ಮೇಲೆ ಇಡೋದಿಲ್ಲ ನನ್ನ ಕಾಲ Gameplan ಇರಬೇಕು ಇದು ಕಲಿಗಾಲ ತಪ್ಪು ತಿಳಿಯಬೇಡಿ I am not a ಶೋಕಿಲಾಲ ಶಬಾಷ್ ನನ್ನ life-y ಹಿಂಗಾಗಿದೆ (ಆಳಂಗಾಗಿದೆ) ನನ್ನ life-y ಹಿಂಗಾಗಿದೆ (ನಗಂಗಾಗಿದೆ) ನನ್ನ life-y ನನ್ನ life-y ನನ್ನ life-y ಹಿಂಗಾಗಿದೆ (ಇರ್ರಂಗಾಗಿದೆ) ನನ್ನ life-y ಹಿಂಗಾಗಿದೆ (ಹೋಗಂಗಾಗಿದೆ) ನನ್ನ life-y ನನ್ನ life-y ಮದುವೆ ಮಾಡ್ಕೋ Honeymoon-u ಮಾಡ್ಕೋ ಮನೆ ಮಾಡ್ಕೋ ಬೇಗ ಮಕ್ಳು ಮಾಡ್ಕೋ ಇದ್ನ ಕೇಳಿ ಕೇಳಿ ಕಿವಿಗಳು ಆಗುತ್ತಿವೆ ತೂತ ಬಂದಂಗೆ ಆಗುತ್ತೆ ಮೈಯಮೇಲೆ ಭೂತ ಇದಕ್ಕೆಲ್ಲ ತಲೇನೆ ಕೆಡುಸ್ಕೊಳೋಲ್ಲ ನಂಗೆ ಒಳ್ಳೆ time-u ಬಂದಾಗ ಯಾರ ಕೈಗೂ ಸಿಗೋಲ್ಲ ಆಸೆಗಳು ಇದೆ ನಂಗೆ Life-ನಲ್ಲಿ ಸಿಕ್ಕಾಪಟ್ಟೆ ದೇವ್ರಿಗೆ ಹೀಗೊಂದು ಅಪ್ಲಿಕೇಶನ್ ಹಾಕೆಬಿಟ್ಟೆ ಮಳೆಯಲಿ ನೀರ್ ಬದಲು ಸುರಿಬೇಕು ಎಣ್ಣೆ ಶೀತ ಇದ್ರೂ ಕುಡಿತೀನಿ ಒರ್ಸ್ಕೊಂಡು ಗೊಣ್ಣೆ Friends-ಗಳು ಬೇಕೇ ಬೇಕು ಖುಷಿಯಾಗಿ ಇರೋಕೆ Reason ಇಲ್ದೆ ಇದ್ರೂ ಬಂದು ಸುಮ್ನೆ party ಮಾಡೋಕೆ Fail ಆದಾಗ ಬಂದು ನನ್ನ ಬೆನ್ನು ತಟ್ಟೋಕೆ ಸತ್ತಮೇಲೆ ಹೆಗ್ಲು ಕೊಟ್ಟು ಹೊತ್ತುಕೊಂಡು ಹೋಗೋಕೆ ಪುಣ್ಯ ಮಾಡಿರ್ಬೇಕು ಸ್ವಾಮಿ ಒಳ್ಳೆ friends-u ಸಿಗೋಕೆ Tension ಯಾಕೆ ಸ್ವಾಮಿ ಮೂರು ದಿನದ್ ಬಾಳು ಬಾಳೋಕೆ ನನ್ನ life-y ಹಿಂಗಾಗಿದೆ ನನ್ನ life-y ಹಿಂಗಾಗಿದೆ ನನ್ನ life-y ನನ್ನ life-y ಹಿಂಗಾಗಿದೆ (ಆಳಂಗಾಗಿದೆ) ನನ್ನ life-y ಹಿಂಗಾಗಿದೆ (ನಗಂಗಾಗಿದೆ) ನನ್ನ life-y ನನ್ನ life-y
Writer(s): Chandan Shetty Lyrics powered by www.musixmatch.com
instagramSharePathic_arrow_out