音乐视频

Nenape Nithya Mallige
观看 {artistName} 的 {trackName} 音乐视频

Karthik & Jayanth Kaikini 即将举行的音乐会

制作

出演艺人
Karthik
Karthik
主唱
Jayant Kaikini
Jayant Kaikini
表演者
作曲和作词
V. Harikrishna
V. Harikrishna
词曲作者
Jayant Kaikini
Jayant Kaikini
词曲作者
制作和工程
D Beats
D Beats
制作人

歌词

ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ ಸರಸ ಪಾರಿಜಾತವು ವಿರಹ ಚೂಪು ಕೇದಿಗೆ ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ ನೆನಪೇ ನಿತ್ಯ ಮಲ್ಲಿಗೆ ನಿನ್ನ ಕೆನ್ನೆಯಿಂದ ಬಂತೆ ಬಾನಿಗೆ ಕನಕಾಂಬರ ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು ಆಸೆ ನನಗೆ ಉಸಿರಿನಲ್ಲಿ ಮಾಲೆ ಕಟ್ಟಲು ಎಸ್ಟು ಪಕಳೆ ಉಂಟು ಹೇಳು ಸೇವಂತಿಗೆ ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ ನೆನಪೇ ನಿತ್ಯ ಮಲ್ಲಿಗೆ ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೋಸ ಹೋದವು ಗುಟ್ಟು ಮಾಡುವಾಗ ಏನೋ ದಿಟ್ಟ ಕಡಗಿಲೆ ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೇ ಅಂಟಿಕೊಂಡ ದಿವ್ಯಗಂಧ ನೀನು ಸುರಗಿಯೇ ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೇ ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ ಸರಸ ಪಾರಿಜಾತವು ವಿರಹ ಚೂಪು ಕೇದಿಗೆ ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ ನೆನಪೇ ನಿತ್ಯ ಮಲ್ಲಿಗೆ
Writer(s): Harikrishna V, Kaikini Jayant Lyrics powered by www.musixmatch.com
instagramSharePathic_arrow_out