音乐视频

Jeevanada
观看 {artistName} 的 {trackName} 音乐视频

制作

出演艺人
Mehboob Saab
Mehboob Saab
演唱
作曲和作词
Ritvik Muralidhar
Ritvik Muralidhar
作曲

歌词

ಜೀವನದ ಈ ಸಂತೆಯಲಿ ನೂರಾರು ಅಲೆದಾಟ ಬಾಳೊಂದು ಹೋರಾಟ ಜೀವನದ ಈ ಸಂತೆಯಲಿ ನೂರಾರು ಅಲೆದಾಟ ಬಾಳೊಂದು ಹೋರಾಟ ಛಲವೇ ಮನದ ಆಸರೆ ಜಗವೇ ನಿನ್ನ ಕೈಸೆರೆ ನೋವ ಮರೆತು ನಗುವ ಕುರಿತು ಬರೆಯೋ ಆಶಯ ಜೀವನದ ಈ ಸಂತೆಯಲಿ ನೂರಾರು ಅಲೆದಾಟ ಬಾಳೊಂದು ಹೋರಾಟ ಗಂಧ ಗಾಳಿ ಯಾರಿಗೂ ಕಹಿಯ ಕಂಪು ಬೀರದು ಹಗಲು ಇರುಳು ಎಂದು ಒಂದೇ ಸಮನೆ ಬಾರದು ಕಾಲ ಎಂಬ ಗಾಲಿಯು ಇಲ್ಲಿ ಎಂದು ನಿಲ್ಲದು ಕಾಣೋ ನೆರಳು ಕೂಡಾ ನಮ್ಮ ಜೊತೆಗೆ ಬಾರದು ಸಾಗರದ ನೀರು ಸಿಹಿ ಅದೀತೇನು ಕಣ್ಣೀರಾ ಈ ದಡದ ಅಂಚಲಿ ಅರಳೋ ಹೂವು ಬೀದಿಲೀ ಬಾಡೋ ಕನಸ ಬೇಡದು ಹಾರೋ ಚಿಟ್ಟೆ ಬಾನಲಿ ಬೀಳುವ ಆಸೆ ಎಂದೂ ಕೇಳದು ನಾಳೆಗಳ ಈ ಲೋಕದಲಿ ನೀನಾಗು ಸಂಚಾರಿ ಭರವಸೆಯೇ ನಿನ ದಾರಿ ಸೋಲು ಬದುಕ ಕನ್ನಡಿ ಗೆಲುವೇ ಅದರ ಮುನ್ನುಡಿ ನಾಳೆಯನ್ನು ಬೆಳಗೋ ಸೂರ್ಯ ನಿನ್ನ ಕೈಯ್ಯಲಿ ಚಿಂತೆ ನೆನ್ನೆ ತೋರಣ ಅದಕೆ ನೀನೇ ಕಾರಣ ನಡೆಯೋ ಹಾದಿಯಲ್ಲಿ ಕಲ್ಲು ಮುಳ್ಳು ಮಾಮೂಲಿ ಸಾವಿರದ ಹಾಗೆ ಬಾಳೋದು ಹೇಗೆ ನಂಬಿಕೆಯೇ ಈ ಜಗದ ಸೇತುವೆ ಉರಿಯೋ ದೀಪ ಎಂದಿಗೂ ನಿಶೆಯ ಬೆಳಕು ನೀಡದು ಬಿರುಕು ಮೂಡೋ ದೋಣೀಲಿ ಹರುಷದ ಪಯಣ ಎಂದೂ ಸಾಗದು ಜೀವನದ ಈ ಸಂತೆಯಲಿ ನೂರಾರು ಅಲೆದಾಟ ಬಾಳೊಂದು ಹೋರಾಟ ಛಲವೇ ಮನದ ಆಸರೆ ಜಗವೇ ನಿನ್ನ ಕೈಸೆರೆ ನೋವ ಮರೆತು ನಗುವ ಕುರಿತು ಬರೆಯೋ ಆಶಯ
Writer(s): Ritvik Muralidhar, Nithin Jai Lyrics powered by www.musixmatch.com
instagramSharePathic_arrow_out