積分
演出藝人
Ravi Basrur
演出者
Vijay Prakash
聲樂
Supriya Lohith
聲樂
詞曲
Ravi Basrur
作曲
歌詞
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ ನಗುವೇ ನನಗೆ ಸಂಗೀತ
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ ನಗುವೇ ನನಗೆ ಸಂಗೀತ
ನಿನ ಹಿಂದೆ ನಾ ಬಂದರೂ ನೋಡದೆ ಹೋಗುವುದು ಸರಿಯೇ
ತುಸು ದೂರ ಹೋಗಿ ನಗು ನಗುತಲೀ ನನ್ನ ಅಡಿಕೊಳ್ಳುವುದು ಸರಿಯೇ
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ ನಗುವೇ ನನಗೆ ಸಂಗೀತ
ದಿನವಿಡೀ ನಿನ್ನನು ಕಾಯುತ ಕುಂತರು
ಮನಸಲಿ ನಿಲ್ಲದು ಪ್ರೀತಿಯ ತುಂತುರು
ಸೆಳೆತಕ್ಕೆ ಸೋತು ನಿಂತ ನೆರಳು
ಮೌನಕ್ಕೆ ಸಿಕ್ಕಿ ಆಯ್ತು ಮರುಳು
ಬದುಕೇತಕೋ ಹದಗೆಟ್ಟಿದೆ ಹಿತವಾಗಿದೆ ಈ ದಿನ
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ ನಗುವೇ ನನಗೆ ಸಂಗೀತ
ನಿನ ಹಿಂದೆ ನಾ ಬಂದರೂ ನೋಡದೆ ಹೋಗುವುದು ಸರಿಯೇ
ತುಸು ದೂರ ಹೋಗಿ ನಗು ನಗುತಲಿ ನನ್ನ ಅಡಿಕೊಳ್ಳುವುದು ಸರಿಯೇ
ನನ್ನೊಮ್ಮೆ ನೋಡು ನನ್ನ ರಾಜ
ಈ ಮನಸಿಗೆ ನೀನೇ ಮಹಾರಾಜ
ನಿನ್ನ ನೋಡದೆ ಇರಲಾಗದು ನಾ ಹೇಗೆ ಹೇಳುವುದು ತಿಳಿಯೇ
ಕ್ಷಮೆ ಕೇಳುವ ಮನಸಾಗಿದೆ ನನ್ನ ಒಪ್ಪಿ ಅಪ್ಪಿಕೋ ಒಲವೇ
ಗೀತಾ, ಗೀತಾ, ಗೀತಾ
Written by: Ravi Basrur