音樂影片
S. P. Balasubrahmanyam 熱門歌曲
積分
出演艺人
K.S. Chithra
主唱
S. P. Balasubrahmanyam
主唱
S. A. Rajkumar
音乐总监
作曲和作词
K. Kalyan
词曲作者
S. A. Rajkumar
作曲
歌詞
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಈ ಕ್ಷಣವು ಮಾತ್ರವೇ
ಮಾತಿನಲೇ ಈ ಪ್ರೀತಿಯು ಕನಸುಗಳ ತೆರೆದಾಯಿತು
ಕಾತರದ ಕಣ್ಣಂಚಲಿ ಮನಸುಗಳು ಬೇರೆತಾಯಿತು
ಈಗಾರು ಹೇಳೇ ಬೇಗ ಮುಖಾಮುಖಿ ಯಾವಾಗ
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಈ ಕ್ಷಣವು ಮಾತ್ರವೇ
ನಾನೊಂದು ತೀರಾ ನೀನೊಂದು ತೀರಾ ಇಬ್ಬರ ಮನಸು ಭಾರ ಭಾರ
ಈ ಒಂಟಿತನವೂ ಶಾಶ್ವತವಲ್ಲ ನಂಬಿಕೆಯೊಂದೇ ನಮಗಾಧಾರ
ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯು ಸಹಜ
ಪ್ರತಿಯೊಂದು ಹೆಜ್ಜೆಯಲು ಪರೀಕ್ಷೆಯು ಸಹಜ
ದಯಮಾಡಿ ಬಾ ಹತ್ತಿರ ತಾಳೆನು ಈ ಕಾತರ
ನಿನಗಾಗಿ ಜೀವ ಕೊಡಲು ಕಾಯುತಿರುವೆ ಎಲ್ಲಿರುವೆ
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವು ಮಾತ್ರವೇ
ಒಂದೊಂದು ನಿಮಿಷ ವರುಷದ ಹಾಗೆ ಕಾಯಲು ಕಷ್ಟ ಬೇಗ ಕೂಗೆ
ಒಂದು ಸರತಿ ಸಿಗಲು ನೀನು ಏನೇ ಕಷ್ಟ ಬಂದರೂ ಸರಿಯೇ
ಈ ಪ್ರೀತಿಯ ತಳಮಳವು ಎಲ್ಲಿಂದ ಶುರುವಾಯ್ತೋ
ಅಲ್ಲಿಂದಲ್ಲೇ ಈ ಜೀವಕೆ ನಿದಿರೆಯು ಮರೆತ್ಹೋಯ್ತೋ
ಗಾಳಿಯಲು ನಿನ ಸ್ಪರ್ಶವ ಹುಚ್ಚನಂತೆ ಹುಡುಕಾಡಿದೆ
ಪ್ರಿತ್ಸೋರು ನಾವು ಇರಲು ಸೋಲೇ ಇಲ್ಲ ಪ್ರೀತಿಗೆ
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವು ಮಾತ್ರವೇ
ಮಾತಿನಲೇ ಈ ಪ್ರೀತಿಯು ಕನಸುಗಳ ತೆರೆದಾಯಿತು
ಕಾತರದ ಕಣ್ಣಂಚಲಿ ಮನಸುಗಳು ಬೇರೆತಾಯಿತು
ಈಗಾರು ಹೇಳೇ ಬೇಗ ಮುಖಾಮುಖಿ ಯಾವಾಗ
ಓ ಪ್ರೀತಿಯೇ ನೀನೆಷ್ಟು ದೂರವೇ
ಈ ದೂರವು ಒಂದು ಕ್ಷಣವು ಮಾತ್ರವೇ
Writer(s): K. Kalyan, S.a. Rajkumar
Lyrics powered by www.musixmatch.com