Lyrics

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು ಏನೋ ಒಂದು ತೊರೆದ ಹಾಗೆ ಯಾವುದೋ ಒಂದು ಪಡೆದ ಹಾಗೆ ಅಮ್ಮನ ಮಡಿಲ ಅಪ್ಪಿದ ಹಾಗೆ ಕಣ್ಣಂಚಲ್ಲಿ, ಕಣ್ಣೀರ ನೆನಪು ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು ಮೊದಮೊದಲ್ ಹಿಡಿದ ಬಣ್ಣದ ಚಿಟ್ಟೆ ಮೊದಮೊದಲ್ ಕದ್ದ ಜಾತ್ರೆಯ watch-u ಮೊದಮೊದಲ್ ಸೇದಿದ ಗಣೇಶ ಬೀಡಿ ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು ಮೊದಮೊದಲ್ ಕಂಡ touring cinema ಮೊದಮೊದಲ್ ಗೆದ್ದ ಕಬಡ್ಡಿ ಆಟ ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ ಮೊದಮೊದಲ್ ತಿಂದ ಕೈ ತುತ್ತೂಟ ಮೊದಮೊದಲ್ ಆಡಿದ ಚುಕುಬುಕು ಪಯಣ ಮೊದಮೊದಲ್ ಅಳಿಸಿದ ಗೆಳೆಯನ ಮರಣ ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು ಮೊದಮೊದಲ್ ಕಲಿತ ಅರೆ ಬರೆ ಈಜು ಮೊದಮೊದಲ್ ಕೊಂಡ 'Hero' cycle ಮೊದಮೊದಲ್ ಕಲಿಸಿದ ಕಮಲಾ teacher ಮೊದಮೊದಲ್ ತಿಂದ ಅಪ್ಪನ ಏಟು ಮೊದಮೊದಲ್ ಆದ ಮೊಣಕೈ ಗಾಯ ಮೊದಮೊದಲ್ ತೆಗೆಸಿದ color color photo ಮೊದಮೊದಲಾಗಿ ಚಿಗುರಿದ ಮೀಸೆ ಮೊದಮೊದಲಾಗಿ ಮೆಚ್ಚಿದ ಹೃದಯ ಮೊದಮೊದಲ್ ಬರೆದ ಪ್ರೇಮದ ಪತ್ರ ಮೊದಮೊದಲಾಗಿ ಪಡೆದ ಮುತ್ತು (ಮುತ್ತು, ಮುತ್ತು, ಮುತ್ತು, ಮುತ್ತು) ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
Writer(s): K Kalyan, Bharadwaj Lyrics powered by www.musixmatch.com
instagramSharePathic_arrow_out