Music Video

Featured In

Credits

PERFORMING ARTISTS
Sunitha Ananthaswamy
Sunitha Ananthaswamy
Actor
COMPOSITION & LYRICS
Mysore Ananthaswamy
Mysore Ananthaswamy
Composer
S. V. Parameshwara Bhat
S. V. Parameshwara Bhat
Songwriter

Lyrics

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು | ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು | ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು || ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ ಜೇನುಗನಸಿನ ಹಾಡು ಕೇಳುತ್ತಿತ್ತು | ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ ಜೇನುಗನಸಿನ ಹಾಡು ಕೇಳುತ್ತಿತ್ತು | ತುಂಬು ನೀರಿನ ಹೊಳೆಯೊಳಂಬಿಗನ ಕಿರುದೋಣಿ ತುಂಬು ನೀರಿನ ಹೊಳೆಯೊಳಂಬಿಗನ ಕಿರುದೋಣಿ ಪ್ರಸ್ಥಾನ ಗೀತೆಯನ್ನು ಹೇಳುತ್ತಿತ್ತು || ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು ಬರುವ ಮುಂದಿನ ದಿನದ ನವನವೊದಯಕ್ಕಾಗಿ ಪ್ರಕೃತಿ ತಪವಿರುವಂತೆ ತೋರುತ್ತಿತ್ತು | ಬರುವ ಮುಂದಿನ ದಿನದ ನವನವೊದಯಕ್ಕಾಗಿ ಪ್ರಕೃತಿ ತಪವಿರುವಂತೆ ತೋರುತ್ತಿತ್ತು | ಶಾಂತ ರೀತಿಯಲಿರುಳು ಮೆಲ್ಲಮೆಲ್ಲನೆ ಉರುಳಿ ಶಾಂತ ರೀತಿಯಲಿರುಳು ಮೆಲ್ಲಮೆಲ್ಲನೆ ಉರುಳಿ ನಾಳಿನ ಶುಭೋದಯ ಸಾರುತ್ತಿತ್ತು || ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು || ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು ತೂಗುತ್ತಿತ್ತು... ತೂಗುತ್ತಿತ್ತು...
Writer(s): Mysore Ananthaswamy, S.v. Parameshwara Bhatt Lyrics powered by www.musixmatch.com
instagramSharePathic_arrow_out