Lyrics

ನನಗೂ-ನಿನಗೂ ಶುರುವಾಯಿತಂದು ಮಾತು ಪ್ರೀತಿಯಿಂದಲೆ ಎರಡೂ ಕನಸು ಜೊತೆಯಾಗುವಂತೆ ಆಯ್ತು ಭೇಟಿಯಿಂದಲೆ ಒಂದಷ್ಟು ಇರಿಸು ಒಂದಷ್ಟು ಮುರಿಸು ಪ್ರೀತಿಯಲ್ಲಿ ಸಹಜ ದೂರ ನೀನಿದ್ದರೂ ಯಾರೇನೇ ಅಂದರೂ ನಮ್ಮ ಪ್ರೀತಿ ಒಂದೇ ನಿಜ ಇರಲಾರೆ ನಿನ್ನನ್ನೊಮ್ಮೆ ನೋಡದೆ ನಿನ್ನ ಅಮಲೇ ತಲೆಯ ತುಂಬ ಕಾಡಿದೆ ಈ ದಿನ ಮುಸ್ಸಂಜೆ ಜೊತೆ ಹೆಜ್ಜೆ ಇಡುವಂತೆ ಆಸೆ ಒಂದೇ ಒಡಲಂತೆ ಬಾ ಸೇರುವ ಮೈ ಮರೆತು ಸೇರಿ ಜೊತೆಯಾಗಿ ಇರುಳಾಗಿ, ಬೆಳಕ್ಹರಿಯೋವರೆಗು ಬೇರೆ ನೋಟ ಬೇಕಿಲ್ಲ ಸುತ್ತಾ-ಮುತ್ತಾ ನಿನ್ ಹೊರತು ಏಕಾಂತವು ಸಾಕು ಕಾಡಿದ್ಹಾಕು ಚಿಂತೆಗಳನ್ನೆಲ್ಲ ನಾನೇ ನಿನಗೆಲ್ಲ ಪಡಬೇಕಿಲ್ಲವೊ ಕೊರಗು ಪ್ರಶ್ನೆ ಬದುಕಲ್ಲಿ ಜಿನುಗೋದು ಒಮ್ಮೊಮ್ಮೆ ಸಹಜ ಬೇರೆ ಆಗದಂತಿರುವೆಯ ನೋವು-ನಲಿವಿನೊಳಗು? ನೀ ನನ್ನ ಒಲವು ನಿನ್ನಿಂದ ನಲಿವು ನೀನಿರೆ ಸಂತಸ ಹಾರಾಡೋ ಮನಸ ತೇಲಾಡಿಸುವ ಈ ಪ್ರೀತಿಯೇ ಆಗಸ ಇರಲಾರೆ ನಿನ್ನನ್ನೊಮ್ಮೆ ನೋಡದೆ ನಿನ್ನ ಅಮಲೇ ತಲೆಯ ತುಂಬ ಕಾಡಿದೆ
Writer(s): Sharath Kumar Lyrics powered by www.musixmatch.com
instagramSharePathic_arrow_out