Testi

ಕಣ್ಣ ಹನಿಯೊಂದು ಕಣ್ಣಲೇ ತೂಗಿ ಏಕೆ ಹೀಗೊಂದು ಭಾರ? ಎದೆಯೊಳಗೆ ಸಣ್ಣ ಸನ್ನೇ ನೀಡದೇ ನೋವು ತುಂಬಿ ತೂರಿದೆ ವಿಧಿಯೇ ಯಾವುದೀ ಹಣೆಬರಹ ಕಣ್ಣ ಹನಿಯೊಂದು ಕಣ್ಣಲೇ ತೂಗಿ ಏಕೆ ಹೀಗೊಂದು ಭಾರ ಎದೆಯೊಳಗೆ ಚಿಗುರೊಡೆದ ಪ್ರೀತಿಗೆ ಹಾಲೆರೆದ ರೀತಿಗೆ ಕುಡಿಯೊಡೆಸಿ ನೀ ಚಿವುಟಿದೆ ಸೋಂಕಿರುವ ಕಾಲವೇ ತಡಮಾಡು ನಿನ್ನನೇ ಚಿಗುತಿರಲು ಇನ್ನೂ ಕನಸಿವೆ ಆಸೆಯೂ ತೀರದೆ ಆಸರೆ ಕಾಣದೆ ದಿನಗಳು ಸಾಗದೆ ನಿಂತಲೇ ನಿಂತಿವೆ ಕಾಣದ ಕಡಲಿಗೆ ಕನಸಿವು ಜಾರಿದೆ ಕಣ್ಣ ಹನಿಯೊಂದು ಕಣ್ಣಲೇ ತೂಗಿ ಏಕೆ ಹೀಗೊಂದು ಭಾರ ಎದೆಯೊಳಗೆ ನನ್ನದೆಲ್ಲ ನಾಳೆಗೆ ನಾ ಮಾಡಲಾರೆನೇ ನೀನಿಲ್ಲದ ಕಲ್ಪನೆ ಕಾಪಾಡೋ ದೇವರೇ ಕೈಬಿಟ್ಟು ಹೋದರೇ ನಾನೇನು ಮಾಡಬಲ್ಲೆನೇ ಕನಲಿದ ದಿನಗಳು ನಿಂತರೂ ಕೂತರೂ ಕುಸಿಯುವ ಭಾವನೆ ಎಲ್ಲಿಯೇ ಹೋದರೂ ಭಯದಲೇ ಸಾಗುವೆ ಸಾವಿನ ಅಂಚಿಗೆ ಕಣ್ಣ ಹನಿಯೊಂದು ಕಣ್ಣಲೇ ತೂಗಿ ಏಕೆ ಹೀಗೊಂದು ಭಾರ? ಎದೆಯೊಳಗೆ ಸಣ್ಣ ಸನ್ನೇ ನೀಡದೇ ನೋವು ತುಂಬಿ ತೂರಿದೆ ವಿಧಿಯೇ ಯಾವುದೀ ಹಣೆಬರಹ
Writer(s): Raghu Dixit, Raghavendra V Kamath Lyrics powered by www.musixmatch.com
instagramSharePathic_arrow_out