ミュージックビデオ

Eno Ide
{artistName}の{trackName}のミュージックビデオを見る

クレジット

PERFORMING ARTISTS
Raghu Dixit
Raghu Dixit
Performer
COMPOSITION & LYRICS
Raghu Dixit
Raghu Dixit
Songwriter
V. Manohar
V. Manohar
Songwriter

歌詞

ಏನೋ ಇದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನಿದೆ? ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ -ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಓ, ತನ್ನ ರಾಗವನ್ನೇ ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕ ಗೀತೆ ನಾನೇ ಬರೆದಂತೆ ಪರಿತಾಪವೇ ಪ್ರೀತಿಯ ಫಲವೇ? ಸರಿ ಉತ್ತರ ನೀಡು ನೀ ಒಲವೇ ಬೆಳದಿಂಗಳೇ ಮರೆಯಾಗಿದೆ, ಮರೆಯಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಕಾಡುವಂತ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣವೊಂದು ಎದೆಯಲ್ಲಿ ನೀನೇ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ ಇದು ಎಚ್ಚರವಿಲ್ಲದ ಕನಸೇ? ಅಥವಾ ಇದು ಸಾವಿನ ತಿನಿಸೇ? ನಿಜ ಬಣ್ಣವೇ ಬಯಲಾಗಿದೆ, ಬಯಲಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ -ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ
Writer(s): Raghu Dixit, V Manohar Lyrics powered by www.musixmatch.com
instagramSharePathic_arrow_out