Music Video

Music Video

Lyrics

[Chorus]
ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
ಹೇ, ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
[Verse 1]
ಹೇ ಶಂಕರ ಪ್ರೇಮಾಂಕುರ ಆದ ನಂತರ ನೆಮ್ಮದಿ ದೂರ
ಯಾಕೀಥರ ಹೇಳು ಪ್ರೇಮ ಅಂಬೋದೇ ಹುನ್ನಾರ
ಇದರಿಂದ ಶಾಂತಿ ಸಂಹಾರ
ಒಮ್ಮೆ ಚಂದದಿ ನೋಡೋ ಮಹದೇಶ್ವರ
ಶಂಭೋ ಹುಂಬರು ನಂಬೋ ಈ ಪಂಜರ
[Verse 2]
Take a break now and listen to the sound
Praying to my Lord who is all around
Protect this world, oh ಮಹದೇಶ್ವರ
Supreme, divine ಶಂಭೋ ಹರ ಹರ
[Verse 3]
ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೆ ನಾನಿಟ್ಟ ನಂಬಿಕೆ
ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ
[Chorus]
ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
[Verse 4]
ಓ ಪ್ರೇಮವೇ ನಿನಗೆ ಪ್ರಣಾಮ
ನಿನ್ನಿಂದಲೇ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ
ಸಾವಿಲ್ಲದ ಚೈತನ್ಯಧಾಮ
ಈ ಮುಗ್ದ ಹೃದಯದಿ ಚಿಗುರಿದೆ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ
[Chorus]
ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಇವನ ಕರುಣದಿ ಕಾಯೋ ಮಹದೇಶ್ವರ
[Verse 5]
ಶಂಭೋ ಯಾರಿವನ್ಯಾರೋ ಮಹದೇಶ್ವರ
ಪ್ರೇಮ ದೇವರು ಎಂದ ಪ್ರೇಮೇಶ್ವರ
ಬೇರೇನನು ನಾ ಬೇಡೆನು
ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯ ಆಸೆ ಈಡೇರಿಸೋ ಹರ
ಇನ್ನಾಗಲಿ ಬಾಳು ಬಂಗಾರ
Written by: Raghu Dixit, V Manohar
instagramSharePathic_arrow_out

Loading...