Lyrics

ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಬಾರೋ ಸಾಧನಕೇರಿಗೆ ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಬಾರೋ ಸಾಧನಕೇರಿಗೆ ಮಳೆಯು ಎಳೆಯುವ ತೇರಿಗೆ ಹಸಿರು ಏರಿದೆ ಏರಿಗೆ ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ ನಂದನದ ತುಣುಕೊಂದು ಬಿದ್ದಿದೆ ನಂದನದ ತುಣುಕೊಂದು ಬಿದ್ದಿದೆ ಈ ನೋಟ ಸೇರದು ಯಾರಿಗೆ? ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಮೋಡಗಳ ನೆರಳಾಟವು ಅಡವಿ ಹೂಗಳ ಕೂಟವು ಕೋಟಿ ಜೇನ್ನೊಣ ಕೂಟವು ಯಕ್ಷಿ ಮಾಡಿದ ಮಾಟವು ಭೂಮಿತಾಯ್ ಒಡಮುರಿದು ಎದ್ದಳೋ ಭೂಮಿತಾಯ್ ಒಡಮುರಿದು ಎದ್ದಳೋ ಶ್ರಾವಣದ ಸಿರಿ ಬರಲಿದೆ ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಮರವು ಮುಗಿಲಿಗೆ ನೀಡಿದೆ ಗಿಡದ ಹೊದರೊಳು ಹಾಡಿದೆ ಗಾಳಿ ಎಲ್ಲೂ ಆಡಿದೆ ದುಗುಡ ಇಲ್ಲಿಂದೋಡಿದೆ ಹೇಳು ಗೆಳೆಯಾ ಬೇರೆ ಎಲ್ಲಿ ಹೇಳು ಗೆಳೆಯಾ ಬೇರೆ ಎಲ್ಲಿ ಈ ಥರದ ನೋಟವ ನೋಡಿದೆ? ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಬಾರೋ ಸಾಧನಕೇರಿಗೆ
Writer(s): Raghu Dixit, Dr D R Bendre Lyrics powered by www.musixmatch.com
instagramSharePathic_arrow_out