音乐视频

Kaanada Kadalige Lyrical Video Song | C Ashwath, G S Shivarudrappa | Kannada Bhavageethegalu
观看 {artistName} 的 {trackName} 音乐视频

制作

出演艺人
C Ashwath
C Ashwath
表演者
作曲和作词
C Ashwath
C Ashwath
作曲
Shivarudrappa G. S.
Shivarudrappa G. S.
作词

歌词

ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೇ ಒಂದು ದಿನ ಕಡಲನು ಕೂಡಬಲ್ಲೆನೇ ಒಂದು ದಿನ ಕಾಣಬಲ್ಲೆನೇ ಒಂದು ದಿನ ಕಡಲನು ಕೂಡಬಲ್ಲೆನೇ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿ ಗೆಂದು ಕೇಳುತಿದೆ ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ ಎಲ್ಲಿರುವುದೋ ಅದು ಎಂತಿರುವುದೋ ಅದು ನೋಡಬಲ್ಲೆನೇ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುದಿ ತಾನಂತೆ ಮುನ್ನೀರಂತೆ, ಅಪಾರವಂತೆ ಕಾಣಬಲ್ಲೆನೇ ಒಂದು ದಿನ ಅದರೊಳು ಕರಗಲಾರೆನೇ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು ನಾನು, ನಾನು, ನಾನು ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು ಎಂದಿಗಾದರು, ಎಂದಿಗಾದರು, ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೇನು ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೇ ನಾನು ನಾನು, ನಾನು ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೇ ನಾನು ನಾನು, ನಾನು ಕರಗಬಹುದೇ ನಾನು, ನಾನು
Writer(s): C. Ashwath, Dr.g.s.shivarudrappa Lyrics powered by www.musixmatch.com
instagramSharePathic_arrow_out