Music Video
Music Video
Credits
PERFORMING ARTISTS
Harini
Performer
K. Kalyan
Performer
Yogeeswar
Performer
Deva
Lead Vocals
COMPOSITION & LYRICS
K. Kalyan
Songwriter
Deva
Composer
PRODUCTION & ENGINEERING
R.Srinivas
Producer
M.Chandrashekar
Producer
Yogeeswar
Producer
Lyrics
ಮಳೆಬಿಲ್ಲೇ ಮಳೆಬಿಲ್ಲೇ
ಕೊಡೆಹಿಡಿಯೇ ಮಳೆಬಿಲ್ಲೇ
ಮಳೆಬಿಲ್ಲೇ ಮಳೆಬಿಲ್ಲೇ ಜೊತೆನಡಿಯೇ ಮಳೆಬಿಲ್ಲೇ
ಗೆಳೆಯಾ ಬರುತಾನೆ ಊರಿಗೆ
ಹೊಂಬಿಸಿಲೇ ಹೊಂಬಿಸಿಲೇ ರಂಗೋಲಿ ನೀನು ಬಿಡೆಲೇ
ಹೇ ದುಂಬಿ, ಹೇ ದುಂಬಿ ನೀವ್ಹಾಡಿ ಎದೆಯ ತುಂಬಿ
ಬೆಣ್ಣೆಯಾ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸಾರ
ಗಡಿಯಲ್ಲಿ ಕಾದಿಟ್ಟ ಹಮ್ಮೀರ
ಅವ ನನ್ನ ಬಾಳಿನ ಬಂಗಾರ
ಮಳೆಬಿಲ್ಲೇ ಮಳೆಬಿಲ್ಲೇ ಜೊತೆನೆಡೆಯೆ ಮಳೆಬಿಲ್ಲೇ
ಗೆಳೆಯಾ ಬರುತಾನೆ ಊರಿಗೆ
ಭೋರ್ಕಡಲೇ ರಥವಾಗಿ
ಅಲೆ ಅಲೆಗಳೇ ಅಶ್ವಗಳಾಗಿ
ನನ ಸೂರ್ಯ ಬರುವಾಗ ಆ ಸೂರ್ಯನೂ ಕೂಡ ಕ್ಷಣಕಾಲ ಧಂಗಾದನು
ಎಂಟು ದಿಕ್ಕನು ವಶಪಡಿಸಿ
ಪ್ರೇಮದಲಿ ಪರವಶಗೊಳಿಸಿ
ನಿಂತಲ್ಲೇ ನೂರೆಂಟು ಚೈತ್ರಕ್ಕೆ ಹಸಿರಿರುವ ಹಮ್ಮೀರ ನನ್ನವನು
ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ ಹೆಮ್ಮೆಯ ಪುತ್ರ
ಉಸಿರಲ್ಲಿ ಬೆರೆತು ಹೋಗಿ ಹಾಡ್ತಾನೆ ಮನಸಿನ ಹತ್ರ
ಹೃದಯ ನನ್ನ ಹೃದಯ ನನ್ನ ಎದೆಯಲ್ಲೀಗ ಇಲ್ಲ
ಗೆಳೆಯಾ ಪ್ರಿಯಗೆಳೆಯಾ ಹೊತ್ತುಕೊಂಡು ಹೋದನಲ್ಲ
ಈ ಜೀವ ಅವನಲ್ಲಿ ಸೇರಾಯ್ತು
ಅವನಾಸೆ ನನ್ನಾಸೆಯಾಗೊಯ್ತು
ಕಂಡಂತ ಕನಸೆಲ್ಲಾ ನನಸಾಯ್ತು
ಬಯಸಿದ್ದು ಹಂಗೇನೆ ಬದುಕಾಯ್ತು
ಮಳೆಬಿಲ್ಲೇ ಮಳೆಬಿಲ್ಲೇ
ಕೊಡೆಹಿಡಿಯೇ ಮಳೆಬಿಲ್ಲೇ
ಅಂತರಂಗ ಇಲ್ಲಿಟ್ಟು ದೂರಗಡಿಯಲಿ ಕಾಲಿಟ್ಟು
ದೇಶಕ್ಕೆ ದೇಹಾನ ಮುಡಿಪಿಟ್ಟ ವೀರಂಗೆ ಈ ಜೀವ ಮುಡುಪಾಗಿದೆ
ಕೋಟಿಗೊಬ್ಬನೆ ದಳವಾಯಿ ಮಾತು ತಪ್ಪದ ಅನುಯಾಯಿ
ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ ಅವನೆಸರು ಎಂದೋ ಇದೆ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತ್ತೀನಿ
ನನ್ನನ್ನೇ ನಾ ಉಣಬಡಿಸಿ ನಾಳೆಗಳ ಕಳೆಯುತ್ತೀನಿ
ಹಗಲೇ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೇ ಕಾರಿರುಳೇ ದಯಾಮಾಡಿ ಬರಲೇ ಬೇಡ
ನಿಸರ್ಗ ಅನ್ನೋದೆ ಅವನಿಂದ
ಆ ಸ್ವರ್ಗ ಅನ್ನೋದೆ ಅವನಿಂದ
ಅವನಿಂದಲೇ ನನ್ನ ಆನಂದ
ಆನಂದಕ್ಕೂ ಮೀರಿ ಸಂಬಂಧ
ಮಳೆಬಿಲ್ಲೇ ಮಳೆಬಿಲ್ಲೇ ಜೊತೆನಡಿಯೇ ಮಳೆಬಿಲ್ಲೇ
ಗೆಳೆಯಾ ಬರುತಾನೆ ಊರಿಗೆ
ಹೊಂಬಿಸಿಲೇ ಹೊಂಬಿಸಿಲೇ ರಂಗೋಲಿ ನೀನು ಬಿಡೆಲೇ
ಹೇ, ದುಂಬಿ, ಹೇ ದುಂಬಿ ನೀವ್ಹಾಡಿ ಎದೆಯ ತುಂಬಿ
ಬೆಣ್ಣೆಯಾ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸಾರ
ಗಡಿಯಲ್ಲಿ ಕಾದಿಟ್ಟ ಹಮ್ಮೀರ
ಅವ ನನ್ನ ಬಾಳಿನ ಬಂಗಾರ
Written by: Deva, K. Kalyan